ಭಾನುವಾರ, ಡಿಸೆಂಬರ್ 4, 2011

ಮಾತಿಗೆ ಬಣ್ಣ ತುಂಬುವ ಆಸೆ

ಅಪರೂಪಕ್ಕೊಮ್ಮೆ ಮನೆಗೆ ಬಂದಾಗ ಮಾಡಲಿಕ್ಕೆ ಸಿಕ್ಕಾಪಟ್ಟೆ ಕೆಲಸಗಳಿರುತ್ತವೆ. ಮನೆಯವರೊಂದಿಗೆ ಕಾಲೇಜಿನ ಸುದ್ದಿ ಹೇಳೋದು ಅದ್ರಲ್ಲಿ ಮುಖ್ಯ ವಾದದ್ದು .. ಕಾಲೇಜಿನ ಕ್ಯಾಂಪಸ್ಸು,, ಹಾಸ್ಟೆಲ್ ನ ತಿಂಡಿ,, ರೂಂ ಮೇಟ್ಸ್ ಗಳ ರಾಮಾಯಣ ..ಹೀಗೆ ಹಲುಬೋದಿಕ್ಕೆ ಬೇಜಾನ್ ಸಾಮಗ್ರಿಗಳು ಸಿಗುತ್ತವೆ.. 
ಆದರೆ ನಾನಂತೂ ಈ ಸಲ ಬರುವಾಗ ನಿರ್ಧಾರ ಮಾಡಿಕೊಂಡೇ ಬಂದಿದ್ದೆ.. ಏನೇ ಆಗಲಿ ನಾನು ಒಂದು ಚಿತ್ರ ಬಿಡಿಸಬೀಕು ಅಂತ....
ಹವ್ದು.. ಅದೆಷ್ಟು ದಿನ ಆಗೋಯ್ತು ನಾನು ಚಿತ್ರ ಬಿಡಿಸಿ??  ಪ್ರೌಢ ಶಾಲೆಯಲ್ಲಿರುವಾಗ ತಿಂಗಳಿಗೆ ಒಮ್ಮೆ ಯಾವುದಾದರೂ ಒಂದು ಹೂವೋ, ಮನೆಯೋ .. ಮರವೋ ಏನನ್ನಾದರೂ ಬಿಡಿಸುತ್ತಿದ್ದೆ.. ಈಗಲೂ ಬಿಡಿಸುತ್ತಿದ್ದೇನೆ   ಬಿಡಿ.. ಅನಾಟಮಿ ಯ ಅಸ್ಥಿಗಳನ್ನು .  ಸ್ನಾಯುಗಳನ್ನು  ,, ನರವ್ಯೂಹಗಳನ್ನು !!!
ಸರಿ ,, ಮನೆಗೆ ಬಂದೆ..
ಅಂದು ಕೊಂಡ ಹಾಗೆ ಆಯಿತು.. ಬೆಳಿಗ್ಗೆ ಇಡೀ ದಿನ ಹರಟೆ ಹೊಡೆಯುವುದರಲ್ಲಿ .. ಅಮ್ಮನ ಕೈ ರುಚಿಯ ಊಟ ಮಾಡುವುದರಲ್ಲಿಯೇ ಕಾಲ ಹರಣ ಮಾಡಿದೆ.. ರಾತ್ರಿ ಊಟ ಆದ ಮೇಲೆ ನನ್ನ ನಿರ್ಧಾರ ದ ನೆನೆಪಾಯಿತು..( ಪುಣ್ಯ ಆಗಲಾದರೂ ಆಯಿತಲ್ಲ.. ವಾಪಸ್ ಹೋದ ಮೇಲೆ ಆಗಿದ್ದಿದ್ದರೆ??) ಮನೆಯಲ್ಲಿ ಎಲ್ಲರು ಮಲಗುವ ಸಮಯ ದಲ್ಲಿ ಹಾಳೆ,, ಬಣ್ಣ,, ಬ್ರುಶುಗಳಿಗಾಗಿ ನನ್ನ ಹುಡುಕಾಟ ಆರಂಭ ವಾಯಿತು..
ಹ್ಞೂ .. ನಾನು ಬಿಡಿಸಲು ಶುರು ಹಚ್ಚಿದೆ..ಯಾಕೋ ನನ್ನ ಕೈಗಳು ನನ್ನ ಮೇಲೆ ಮುನಿಸಿಕೊಂಡವರ ಹಾಗೆ ವಿಚಿತ್ರವಾಗಿ ಆಡುತ್ತಿದ್ದವು..   palm ನಲ್ಲಿರೋ   fine muscles  ಕೆಲಸವಿಲ್ಲದೆ ಅವುಗಳೆಲ್ಲ ಜಡ್ಡುಗಟ್ತಿವೆ!! ಹೇಗಾಗಿವೆ  ನನ್ನ ಚಿತ್ರಗಳು??
ನಾನೇನು ದೊಡ್ಡ ಕಲಾವಿದೆಯೇನು ಅಲ್ಲ... ಆದ್ರೆ ಕಲೆಯ ಆರಾಧಕಿ...  ಎಂಬಿಬಿಎಸ್ ನ      ದಪ್ಪ ದಪ್ಪ ಪುಸ್ತಕಗಳ ನಡುವಿ ನಲ್ಲಿ ಸಿಲುಕಿ ಕಲೆಯನ್ನೆಲ್ಲಿ ಮರೆತು  ಬಿಡುತ್ತೇನೋ ಎಂಬ ಭಯ...


                                                        








ಶನಿವಾರ, ಸೆಪ್ಟೆಂಬರ್ 3, 2011

ಗುರುವಿನ ಗುಲಾಮನಾಗುವ ತನಕ

ಮೊನ್ನೆ ಮನೆಯಲ್ಲಿ ಚವತಿ ಹಬ್ಬದ ತಯಾರಿ ಮಾಡುತ್ತಿರುವಾಗ ಎದುರು ಮನೆಯ ಹುಡುಗನೊಬ್ಬ ದೊಡ್ಡ ಬ್ಯಾಗ್ನಲ್ಲಿ ಗಿಫ್ಟು , ಬಣ್ಣ ಬಣ್ಣದ ಪರಪರೆಗಳನ್ನು ಹಿಡಿದುಕೊಂಡು ಹೋಗ್ತಾ ಇದ್ದ .. 'ಏನೋ ಮಾರಾಯಾ,, ಜೋರು ತಯಾರಿ ಹಬ್ಬಕ್ಕೆ.. ನಿಮ್ಮನೆಯಲ್ಲೂ ಗಣಪತಿ ಇಡ್ತಾರ?' ಅಂತ ಕೇಳಿದೆ.. ಅದಕ್ಕವನು,, 'ಇಲ್ಲಾ ಅಕ್ಕಾ teacher s day preparation '  ಅಂತ ಹೇಳಿ ಬಂದಷ್ಟೇ ವೇಗವಾಗಿ ಹೋದ..

ಆಗ ನೆನಪಾಯಿತು ,,
ಹೌದಲ್ಲ.. ಬಂದೇ ಬಿಡ್ತು ಸೆಪ್ಟೆಂಬರ್ ೫ .. ಶಿಕ್ಷಕರ ದಿನಾಚರಣೆ ..
 ನಾವು ಕೂಡ ಪ್ರಾಥಮಿಕ ಶಾಲೆಯಲ್ಲಿದ್ದಾಗ ಅದೆಷ್ಟು ಸಂಬ್ರಮದಿಂದ ಇಂಥಹ ದಿನಗಳಿಗೆ ಎದುರು ನೋಡುತ್ತಿದ್ದೆವು ..  ಹಾಡು ನೃತ್ಯ ಅಂತ ಎರಡು ವಾರದಿಂದ ತಯಾರಿ ನಡೆಯುತ್ತಿತ್ತು .. ಕ್ಲಾಸ್ಸಿನವರೆಲ್ಲ ತಮ್ಮ ತಮ್ಮ ಕ್ಲಾಸ್ ಟೀಚೆರ್ಸ್ ಗಳಿಗೆ ಏನಾದರು ಉಡುಗೊರೆ ಕೊಡುತ್ತಿದ್ದರು... ಶಿಕ್ಷಕರ ಎದುರು ಹಾಡು ಡ್ಯಾನ್ಸು ಮಾಡಿ ಅವರಿಗೆ ಗಿಫ್ಟು ಕೊಟ್ಟರೆ ಅವರ ಮೆಚ್ಚುಗೆ ಗಳಿಸಬಹುದು ಎಂಬ ಸ್ವಾರ್ಥವೂ ಇರಬಹುದು ! ಆದರೆ ಇದು   ಹಲವಾರು ಸಂಧರ್ಭಗಳಲ್ಲಿ ನಿಜ ವಾಗುತ್ತಿದ್ದುದು ವಿಪರ್ಯಾಸ !
ಆಗ ನಮಗೆ ನಿಜವಾಗಲೂ ಶಿಕ್ಷಕರ ದಿನಾಚರಣೆಯ ಮಹತ್ವದ ಬಗ್ಗೆ ಅರಿವಿರಲಿಲ್ಲ .. ಸುಮ್ಮನೆ ಸಾಮಾನ್ಯ  ಜ್ಞಾನಕ್ಕಾಗಿ ಸರ್ವಪಲ್ಲಿ ರಾಧಾಕೃಷ್ಣನ್ ರವರು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಮಾಡಿದರು ಎಂದು ತಿಳಿದಿಟ್ಟುಕೊಂಡಿದ್ದೆವು .. ಯಾರಾದರೂ ಭಾಷಣ ಮಾಡಲು ಬಂದಾಗ ಯಾವಾಗ ಮುಗಿಸುತ್ತಾರೋ, ಯಾವಾಗ ಡ್ಯಾನ್ಸು ಶುರುವಾಗುತ್ತದೋ ಎಂದು ಎದುರು ನೋಡುತ್ತಿದ್ದೆವು !

ಈಗ ಅನ್ನಿಸುತ್ತೆ ಅದೆಷ್ಟು ದಾಂಬಿಕವಾಗಿ  ಆಚರಿಸುತ್ತಾ ಇದ್ದೇವೆ ಅಂತ ಹವ್ದಲ್ಲವೇ?
 ಈ ರೀತಿಯಲ್ಲಿ ಕೇಕು ಕತ್ತರಿಸಿ , ಯಾವುದೋ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದರೆ ಶಿಕ್ಷಕರ ದಿನವನ್ನು ಆಚರಿಸಿದ ಸಾರ್ಥಕತೆ ಲಭಿಸುತ್ತದೆಯೇ?
ಹಾಗಾದರೆ ವಿಧ್ಯಾರ್ಥಿಯಾದವನು ಶಿಕ್ಷಕರಿಗೆ ಏನು ನೀಡಬೇಕು? ನಿಜವಾದ ಶಿಕ್ಷಕರು ನಮ್ಮಿಂದ ಒಳ್ಳೆಯ ನಡವಳಿಕೆಯನ್ನು ,, ಉತ್ತಮ ಪ್ರಗತಿಯನ್ನು ಬಯಸುತ್ತಾರೆ.. ಒಂದು ಹಿಡಿ ಪ್ರೀತಿ ,, ಗೌರವ ನೀಡಿದರೆ ಅವರನ್ನು ಸನ್ಮಾನಿಸಿದಂತೆ ... 

 ದಾರಿಯಲ್ಲಿ ಕಲಿಸಿದ ಗುರುಗಳು ಕಂಡಾಗ ನಮಸ್ತೆ ಎಂದು ನಗು ಬೀರಿ ಆರಾಮಾ ಟೀಚರ್ ಎಂದು ಮಾತನಾಡಿಸಿದಾಗ  ಅವರಿಗೆ ಸಿಗುವ ಖುಷಿಯನ್ನು ಬಣ್ಣಿಸಲಾಗದು.. ಇಂತಹ ಒಂದು ಕ್ಷಣಕ್ಕಾಗಿಯೇ ಅವರು ನಮ್ಮೆಲ್ಲ ಕೀಟಲೆಗಳನ್ನು ಸಹಿಸುತ್ತ ,, ನಮ್ಮ ತಪ್ಪುಗಳನ್ನು ತಿದ್ದುತ್ತ ,, ನಮ್ಮ ಕನಸಿಗೆ ರೂಪು ರೇಷೆ ನೀಡುತ್ತಿದ್ದುದು ..

ನಾನಂತೂ ಶಿಕ್ಷಕರ ವಿಷಯದಲ್ಲಿ ತುಂಬಾ ಆದೃಷ್ಟವಂತೆ...
ಚಿಕ್ಕಂದಿನಲ್ಲಿ ಬೆತ್ತದ ರುಚಿ ಕಾಣಿಸಿ ಮಗ್ಗಿ ಕಲಿಸಿದ ಬಾಲವಾಡಿಯ ಆಕ್ಕೊರಿಂದ ಹಿಡಿದು ಪಿಯುಸಿ ಯತನಕ ಕಲಿಸಿದ ಎಲ್ಲಾ ಮಿಸ್ಸು ಟೀಚೆರು ಮೇಡಮ್ಮು ಸರ್ ಎಲ್ಲರು ನನ್ನ ಬಾಳಿನ ಶಿಲ್ಪಿಗಳು ...
ಈಗ ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೊರಟು ನಿಂತಾಗ ಯಾಕೋ ಇವರೆಲ್ಲ ನೆನಪಾದರು ... ಶಿಕ್ಷಕರ ದಿನ ಹೊಸ್ತಿಲಲ್ಲಿ ಇರುವಾಗ ಇವರಿಗೊಂದು ಧನ್ಯವಾದ ಅರ್ಪಿಸಬೇಕು ಅಂತ ಅನ್ನಿಸಿತು ,,


















thank u teachers

ಶುಕ್ರವಾರ, ಆಗಸ್ಟ್ 5, 2011

ಮಲೆನಾಡ ಮಳೆ


ಮಲೆನಾಡ ಮಳೆಯಲ್ಲಿ ಅಡಿ ಮುಡಿಯು ನೆನೆದಾಗ
ಶೀತಲದ ಸುಳಿಗಾಳಿ ಸುಯ್ಯೆಂದು ಮೊರೆದಾಗ
ನೆತ್ತರು ಹೆಪ್ಪಾಗಿ ಚಳಿಯಾಗಿ ಕೊರೆದಾಗ
ಇದುವಲ್ಲವೇ ಸ್ವರ್ಗ ಎಂದೆನಿಸಿತಾಗ

ನೆಲ ಮುಗಿಲು ಒಂದಾದಂತೆ ಸುರಿಯುವ ಆ ಸೋನೆಯ ಪರಿ
ತುಂಬು ಜವ್ವನೆಯಂತೆ ಮೈದುಂಬಿ ಹರಿಯುವ ಝರಿ
ಬೆಳ್ಳಿಯಾ ತೆರೆಯಂತೆ ಮಂಜು ಕವಿದಿರೆ
ಮಿನುಗುವ ಚುಕ್ಕಿ ಮಸುಕಾಗಿ ಮರೆಯಾಗಿರೆ ..

ವಟಗುಟ್ಟುತ್ತಿವೆ  ಕಪ್ಪೆಯ ಬಳಗವು
ಕುಟುರುತ್ತಿವೆ ಮರ ಜಿರಳೆಗಳು
ತರುಲತೆಗಳ ಚಿಗುರಿನ ಸೌಂದರ್ಯ ದ ಮೆರಗು
ಸೊಂಪಾಗಿ ಹ ಮರಗಳಲ್ಲಿ ಹಕ್ಕಿಗಳ ಗುನುಗು

ಧನ್ಯವೋ ಧನ್ಯ ಈ ಮಲೆನಾಡ ಜನ
ಪ್ರತಿಮಳೆಯು ನೀಡುವುದಿಲ್ಲಿ ಹೊಸ ಚೈತನ್ಯ
ನೋಡಲ್ಲಿ ಹೊರಟಿಹನು ನಮ್ಮ ಅನ್ನದಾತನು
ಭರದಿಂದ ಹೊಲವನ್ನು ಹದಗೊಳಿಸಿ ಬಿತ್ತಲು ಬೀಜವನು

ಶುಕ್ರವಾರ, ಜೂನ್ 10, 2011

ಬಾನಿನಿಂದ ಬುವಿಗೆ

ಹಕ್ಕಿಯಾಗುವ ಆಸೆ ಹೊತ್ತು
ಬ್ರಹ್ಮನ ಮುಂದೆ ನಿಂತೆ..
ಅವ ನನ್ನ
ಪುಕ್ಕ ಕಿತ್ತು,
ರೆಕ್ಕೆ ಕತ್ತರಿಸಿ,,,
ಗಗನದಿ ಹಾರಿ ನಲಿದಾಡುವ
ನನ್ನ ಕನಸನು ಸುಟ್ಟು,,,,
ಮಣ್ಣಿಗೆ ಮುತ್ತಿಕ್ಕು
ಎಂಬ ಶಾಪವನಿತ್ತ ........


ಗುರುವಾರ, ಜೂನ್ 2, 2011

ಶಿಬಿರ ದಲ್ಲಿ ೧೫ ದಿನ

ಯಾವುದಾದ್ರೂ ಒಂದು ಟಾಪಿಕ್ ಇಟ್ಟುಕೊಂಡು ಚೆನ್ನಾಗಿ ಬರಿಯೋಣ ಅಂತ ಮಾಡ್ದ್ರೆ ಸುಟ್ಟದ್ದು ..ಒಂದು ಅಕ್ಷರನೂ ಬರಿಲಿಕ್ಕೆ ಆಗ್ತಾ ಇಲ್ಲ..ಇಗ ಪರೀಕ್ಷೆ ಗಳೆಲ್ಲ ಮುಗಿದಿದೆ..ರಿಸಲ್ಟ್ ಕೂಡ ಬಂದಿದೆ
.. ಸೊ ..ಸಂ ವಾಟ್ ಫ್ರೀ ..
 ಮತ್ತೆ ಆ ಪರೀಕ್ಷೆ ಗಿರೀಕ್ಷೆ ಅಂತ ತಲೆ ತಿನ್ನೋಲ್ಲ ಮಾರಾಯ್ರೆ.. ಹೆದರಬೇಡಿ..

ನಾನು ನನ್ನ  cet ಪರೀಕ್ಷೆ ಮುಗಿದ ಮೇಲೆ ಒಂದು ಶಿಬಿರಕ್ಕೆ ಹೋಗಿದ್ದೆ,, ಕುಮಾರಿ ಸಂಸ್ಕ್ರತಿ ಶಿಬಿರ . ಸ್ವರ್ಣವಲ್ಲಿ ಮಠದವರು ಆಯೋಜಿಸಿದ್ದು,,, ಹೇಗೂ ಎಕ್ಷಮ ಮುಗಿದಿದೆ;,, ನಿಜ  ಅಂದ್ರೆ ,ರಿಸಲ್ಟ್ ಬರೋ ಸಮಯದಲ್ಲಿ ಮನೇಲಿ ಇರೋದನ್ನ ನಂಗೆ ತಪ್ಪಿಸಿಕೊಳ್ಳಬೇಕಿತ್ತು.ಆದ್ದರಿಂದ ನನ್ನ ಗೆಳತಿಯೊಬ್ಬಳು ಹೀಗೊಂದು ಶಿಬಿರ ಇದೆ ಅಂತ ಹೇಳಿದಾಗ ನಾನು ಹಿಂದೆ ಮುಂದೆ ಯೋಚಿಸದೆ ಎಸ್ ಅಂತ ಹೇಳಿದೆ,,

ಆಯ್ತು ಸರಿ.. ಅವರು ಹೇಳಿದ ದಿನ ಯಡಳ್ಳಿ ಕಾಲೇಜ್ ಗೆ ಹೋದೆ.
.ಅಲ್ಲಿ ಕೇವಲ ೯ ಜನ ಬಂದಿದ್ರು,, ಹಿಂದಿನ ವರ್ಷಕ್ಕೆಲ್ಲ ಹೋಲಿಸಿದರೆ ತುಂಬಾ ಕಡಿಮೆ ಅಂತ ಶಿಬಿರ ಮುಖ್ಯಸ್ಥೆ ಹೇಳ್ತಾ ಇದ್ರು .. ಸಂಜೆ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿ ಗಳು ಬಂದು ಶಿಬಿರದ ಉಧ್ಘಾಟನೆ ಮಾಡಿದರು..
ಮರುದಿನ ದಿಂದ ಶುರುವಾಯ್ತು ನಮ್ಮ ದಿನಚರಿ.. ಸೂರ್ಯವಂಶ ದವಳಾಗಿದ್ದ ನಾನು ಸೂರ್ಯ ಹುಟ್ಟುವ ಮುಂಚೆ ಏಳಬೇಕಿತ್ತು ,!!,  ೫ ಗಂಟೆಗೆ ಎಬ್ಬಿಸಿ ಪ್ರಾತ ಸ್ಮರಣೆ ಮಾಡಿಸ್ತಾ ಇದ್ದರು,,  ಅದರ ನಂತರ  ಧ್ಯಾನ,,,!! ಆಗಲೇ ಚೆನ್ನಾಗಿ ನಿದ್ದೆ ಮಾಡ್ತಾ ಇದ್ದೆ ಅಂತ ಬೇರೆ ಹೇಳಬೇಕಿಲ್ಲ ಅಲ್ವ?!!
ಧ್ಯಾನ ದ ನಂತರ ಯೋಗಾಸನ,, ಇದು ನನಗೆ ತುಂಬಾ ಹಿಡಿಸಿತು..ಅದೆಷ್ಟು ಸರಳವಾಗಿ ನಮಗೆ ಕಷ್ಟ ಕಷ್ಟ ವಾದ ಯೋಗಾಸನ ಹೇಳಿಕೊಡ್ತ ಇದ್ರು..
ಇರುವವರು ಕೇವಲ ೯ ಜನ ಆಗಿದ್ದಕ್ಕೆ ನಮಗೆ ಸ್ನಾನ ತಿಂಡಿ ಊಟ ಕ್ಕೆಲ್ಲ ಗಡಿಬಿಡಿ ಆಗಲಿಲ್ಲ.. ಆದ್ರೆ ಕೆಲಸ ಸ್ವಲ್ಪ ಜಾಸ್ತಿ ಆಗ್ತಾ ಇತ್ತು.. ಅಷ್ಟೇ..
ತಿಂಡಿ ಆದಮೇಲೆ ಕರಕುಶಲ ಹೇಳಿ ಕೊಡ್ತಿದ್ರು,, ಸ್ತೋತ್ರ ದೇಶಭಕ್ತಿಗೀತೆಗಳು ಸಾಂಪ್ರದಾಯಿಕ ಗೀತೆಗಳು ಹೀಗೆ ತುಂಬಾ ಹಾಡುಗಳನ್ನ ಹೇಳಿ ಕೊಟ್ಟಿದಾರೆ.. ಯಾವುದೇ ಹಬ್ಬ ಹರಿದಿನಗಳಲ್ಲಿ ಇನ್ನು ಹಾಡಿಗೋಸ್ಕರ ತಡಕಾಡುವ ಪ್ರಸಂಗ ಬರೋದಿಲ್ಲ ಅಷ್ಟೊಂದು ಹಾಡುಗಳನ್ನ ಹೇಳಿಕೊಟ್ಟಿದಾರೆ...
ಅದು ಆದ ಮೇಲೆ ಉಪನ್ಯಾಸ ಇರ್ತಇತ್ತು..ಭಾರತೀಯ ಸಂಸ್ಕ್ರತಿ ಪರಂಪರೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ
ದೊಡ್ಡ ದೊಡ್ಡ ವಿದ್ವಾಂಸರು ಬರ್ತಾಇದ್ರು.ಕೆಲವೊಂದುನಮಗೆ ಬೋರ್ ಬರುವ ವಿಷಯ ಗಳು ಇದ್ವು,, ಆದ್ರೆ ನಮ್ಮ ಸಂಸ್ಕ್ರತಿಯ ಬಗ್ಗೆ ನಾವಲ್ಲದೆ ಇನ್ಯಾರು ತಿಳಿದುಕೊಳ್ತಾರೆ? ನಾವೇ ಈ ಬಗ್ಗೆ ಅಸಡ್ಡೆ ತೋರಸ್ತ ಇರೋದು ಸರೀನಾ? ಅಂತ ಯೋಚನೆ ಮಾಡಿದಾಗ ಯಾವ ವಿಷಯ ಕೂಡ ಬೋರ್ ಹೊಡಿಸಲಿಲ್ಲ..
 ಸಂಜೆ ಆಟಕ್ಕೆ ಬಿಡ್ತಾ ಇದ್ರು..
ನಾವು ೯ ಜನ ಮನೆ ಮಕ್ಕಳ ಥರ ಆಗಿಬಿಟ್ಟ್ದ್ವಿ... ಕನ್ನಡ ಶಾಲೇಲಿ ಆಡ್ತಾ  ಇದ್ದ ಬೆಟ್ಟೆ ಆಟ, ಕಣ್ಣಾಮುಚ್ಚಾಲೆ ಎಲ್ಲ ಆಟ ಅಡ್ತ ಇದ್ವಿ...
ಸಂಜೆ ಕಾಲು ಮುಖ ತೊಳೆದುಕೊಂಡು ಭಗವದ್ಗೀತೆ., ಲಲಿತ ಸಹಸ್ರನಾಮ ,ಭಜನೆ  ಎಲ್ಲ ಹೇಳಬೇಕಿತ್ತು... ನಂತರ ಯಶೋದಕ್ಕನ ಕಥೆ !!!... its  wonderful .. ಅಧ್ಭುತ...!! ತುಂಬಾ ಚೆನ್ನಾಗಿ ರಾಮಾಯಣ ಮಹಾಭಾರತ ದ ಕಥೆಗಳು ಮಹಾನ್ ತಪಸ್ವಿಗಳ ಕಥೆ ಹೇಳ್ತಾ ಇದ್ರು,,,ಅಬ್ಬ..  ಒಂದು ರೀತಿ ಆಧ್ಯಾತ್ಮದ ಲೋಕದಲ್ಲಿ ಕರೆದುಕೊಂಡು ಹೋದ ಅನುಭವ..
ಹಾ ಇನ್ನೊಂದು ವಿಷಯ ಹೇಳಲೇ ಬೇಕು,,, ರಾತ್ರಿ ಊಟ ಆದ ಮೇಲೆ ಪ್ರತಿಭಾ ಪ್ರದರ್ಶನ ಇರ್ತ ಇತ್ತು..ನಾನು ಪ್ರಬಂಧ ಬರೀತೀನಿ,, ಚಿತ್ರ ಬಿಡಿಸ್ತೀನಿ,, ಆದ್ರೆ stage  ಮೇಲೆ ನಿತ್ಕೊಂಡು ಭಾಷಣ ಮಾಡೋದು, ಹಾಡು ಹೇಳೂದು ಅಂದ್ರೆ ಜೀವಾನೇ ಬಾಯಿಗೆ ಬಂದ ಹಾಗೆ ಆಗುತ್ತೆ,,ಅಷ್ಟೊಂದು ಹೆದರಿಕೆ,, ಯಾಕೋ ಏನೋ ಇಲ್ಲಿ ಮಾತ್ರ ಹಾಗೆ ಆಗಲೇ ಇಲ್ಲ.. ನಾನು ಹಾಡು ಹೇಳಿದೆ ,ಏಕಪಾತ್ರಾಭಿನಯ, ಚಧ್ಮವೇಶ., ನೃತ್ಯ ಮಾಡಿದೆ.. ಕೊನೆಯ ದಿನ ನಾವೆಲ್ಲರೂ ಸೇರಿ ರಾಮಾಯಣದ ನಾಟಕ ಕೂಡ ಮಾಡಿದ್ವಿ... ಆ ನಾಟಕ ಕ್ಕೆ ಸ್ಕ್ರಿಪ್ಟ್ ಬರೆದವಳು ನಾನೇ.. ಇದನ್ನ ಕೊಚ್ಚಿಕೊಳ್ಳಬೇಕು ಅಂತ ಬರೀತಾ ಇಲ್ಲ ,, ಇ ವೇದಿಕೆ ನನ್ನ ಆತ್ಮ ವಿಶ್ವಾಸ ಹೆಚ್ಚಿಸಲು ಯಾವ ರೀತಿಯಲ್ಲಿ ಸಹಾಯ ಮಾಡಿದೆ ಅಂತ ತಿಳಿಸ್ತ ಇದ್ದೀನಿ ಅಷ್ಟೇ,,
 ಆ ೧೫ ದಿನಗಳನ್ನ ನಾನು ಟೀವಿ ನೂಡುವುದರಲ್ಲೋ ,ನೆಟ್ ನಲ್ಲಿ ಚಾಟ್ ಮಾಡುವುದರಲ್ಲೋ, ಅತ್ತೆ ಮನೆ, ಅಜ್ಜಿ ಮನೆ  ತಿರಗುತ್ತಾ ,ಮನೆಯಲ್ಲಿ ಅಮ್ಮನಿಗೆ ಕಾಟ ಕೊಡ್ತಾ ಕಳಿಯುತ್ತಿದ್ದೆ . ಅದೇ ೧೫ ದಿನಗಳನ್ನ ಇಷ್ಟೊಂದು ಉಪಯುಕ್ತ ವಾಗಿ ಕಳಿಯಲು ಸಾಧ್ಯ ಮಾಡಿಸಿ ಕೊಟ್ಟಂಥಹ ನನ್ನ ಆ ಗೆಳತಿಗೆ ತುಂಬು ಹೃದಯದ ಧನ್ಯವಾದಗಳು..

ನಮ್ಮ ಸಂಸೃತಿಯ ಉಳಿವಿಗೆ ಮಠದವರು ಮಾಡುತ್ತಿರುವ ಪ್ರಯತ್ನಕ್ಕೆ ನಮ್ಮ ಸಹಕಾರ ನೀಡೋಣ ,,  

ಭಾನುವಾರ, ಜನವರಿ 9, 2011

ಹರಟೆ

ಕನಸು ಕಟ್ಟುವುದು ಸುಲಭ
ಅದನ್ನು ನನಸು ಮಾಡುವದು ಅಷ್ಟೇ ಕಷ್ಟ
ಎಂದು ಅನುಭವಿಗಳು ಹೇಳುವುದನ್ನು ಕೇಳಿದ್ದೆ
ಹುಚ್ಚು ಮನಸು ...
ಬೇಡ ಬೇಡ ಎಂದರೂ
ದೊಡ್ಡ ಗೋಪುರವನ್ನೇ ಕಟ್ಟಿತು ..
ಅದು ಕನಸಿನ ಗೋಪುರ ,,,
ನನ್ನ ಭವಿಷ್ಯದ ಸುಂದರ ಬದುಕಿನ ಗೋಪುರ ...
ಕಣ್ಣ ರೆಪ್ಪೆಯಲ್ಲಿಯೇ ಕುಣಿದು ಮಾಯವಾಗುವ ಮರೀಚಿಕೆಯ
ಬೆನ್ನುಹತ್ತಿದ್ದ ನನಗೆ ..
ವಾಸ್ತವದ ಅರಿವಾದಾಗ
ಎಂಟು ತಿಂಗಳುಗಳೇ ಗತಿಸಿದ್ದವು ,,
ಏಕೆಂದರೆ
ಪರೀಕ್ಷೆಗೆ ಕೇವಲ ಎರಡು ತಿಂಗಳುಗಳು ಉಳಿದಿದ್ದವು ..!!!
ನನ್ನೆಲ್ಲಯ ಹಳೆಯ ನೆನಪುಗಳನ್ನು
ಗುಡಿಸಿ ,,ಒಟ್ಟುಮಾಡಿ ,,ಪೆಟ್ಟಿಗೆಯಲ್ಲಿಟ್ಟು ,,
ಕಾಲವೆಂಬ ಕಡಲಲ್ಲಿ ಎಸೆದು ಬಿಡಬೇಕೆಂದಿದ್ದೆ .....
ಆ ನೆನಪಿನ ಪೆಟ್ಟಿಗೆ ಕೈ ಜಾರಿತು ,,
ಚೆಲ್ಲಿದ ಆ ನೆನಪುಗಳನ್ನು
 ಹೆಕ್ಕಿ ಪೆಟ್ಟಿಗೆಯಲ್ಲಿ ಹಾಕಿದೆ
ಖುಷಿಯ ಅರ್ಥ ಕೈಗಳಿಗೆ ಅಂಟಿಕೊಂಡಿತ್ತು ...
ಮನವೆಂಬ ತೀರ ಒದ್ದೆಯಾಗಿತ್ತು ....

ಶುಕ್ರವಾರ, ಜನವರಿ 7, 2011

ನಿನ್ನ ನೆನಪು

ನೆನಪೇ ನಿನಗೊಂದು ನಮಸ್ಕಾರ
ಬಾರದಿರು ಮತ್ತೆ ಮತ್ತೆ ..
ಈ ಜೀವವಿಲ್ಲದ ಹೃದಯಕ್ಕೆ

ಪುಟಗಟ್ಟಲೆ ಬರೆದ ಕವನಗಳನ್ನು
ಮನಸ್ಸಿನಲ್ಲಿಯೇ ಗೀಚಿದ ಪತ್ರಗಳನ್ನು
ನಿನಗಾಗಿಯೇ ಹಾಡಿದ ಹಾಡುಗಳನ್ನು
ಕಣ್ತುಂಬ ಕಟ್ಟಿದ ಸ್ನೇಹದ ಕನಸುಗಳನ್ನು
ಎಲ್ಲ
ಎಲ್ಲಾ ಮರೆತುಬಿಡಬೇಕು ಅಂದಿದ್ದೆ ..

ಆದರೆ...
ಉಳಿದು ಬಿಟ್ಟೆ ಎದೆಯಾಳದಲ್ಲಿ
ಬೆಟ್ಟದಂತೆ ..ಕಡಲಂತೆ...ಗಾಳಿಯಂತೆ...
ಬೆಂಕಿಯಂತೆ...ಬೂದಿಯಂತೆ...
ನಿಂತು ಬಿಟ್ಟೆ ನಾ ಒಂಟಿಯಾಗಿ
ಗಾಳಿಗೆ ಹಾರಿದ ದೀಪದಂತೆ ..

ನೆನಪೇ ,,,ನಿನಗೊಂದು ನಮಸ್ಕಾರ ,
ಬಾರದಿರು ಮರಳಿ ಮತ್ತೆ ಮತ್ತೆ ..
ಈ ಹೆಣವಾದ ಬಾಳಿಗೆ ಋಣವಾಗಿ.....

ಹಾಗೆ ಸುಮ್ಮನೆ,,

ಆ ದೇವರು ನನ್ನನ್ನು ಸೃಷ್ಟಿಸಿ
ಈ ನೆಲದಲ್ಲಿ ಬಿಡುವಾಗ
ಅದ್ಯಾವ ಧ್ಯಾನದಲ್ಲಿದ್ದನೋ,,,
ನನ್ನಲ್ಲಿ ಹಕ್ಕಿಯ ಮನಸ್ಸನ್ನು
ಇಟ್ಟುಬಿಟ್ಟ,,
ಆದರೆ ...
ನೆಲದಲ್ಲಿ ಆಕಾಶವೇ ಇರಲಿಲ್ಲ!!!
ಟೈಟಾನಿಕ್ ಮುಳುಗಿದರೂ
ಕಾಗದದ ದೋಣಿ ಮುಳುಗದು ...
ನೆಂದು ಚಪ್ಪಟೆಯಾದರೂ.
ತಲೆ ಕೆಳಗಾದರೂ
ತೇಲುವುದು .;
ಕನಸಿನಂತೆ ,,ಧ್ಯೇಯದಂತೆ ..


ಬದುಕಿನಂತೆ..,,
ನಿನ್ನಂತೆ..