ಭಾನುವಾರ, ಜನವರಿ 9, 2011

ಹರಟೆ

ಕನಸು ಕಟ್ಟುವುದು ಸುಲಭ
ಅದನ್ನು ನನಸು ಮಾಡುವದು ಅಷ್ಟೇ ಕಷ್ಟ
ಎಂದು ಅನುಭವಿಗಳು ಹೇಳುವುದನ್ನು ಕೇಳಿದ್ದೆ
ಹುಚ್ಚು ಮನಸು ...
ಬೇಡ ಬೇಡ ಎಂದರೂ
ದೊಡ್ಡ ಗೋಪುರವನ್ನೇ ಕಟ್ಟಿತು ..
ಅದು ಕನಸಿನ ಗೋಪುರ ,,,
ನನ್ನ ಭವಿಷ್ಯದ ಸುಂದರ ಬದುಕಿನ ಗೋಪುರ ...
ಕಣ್ಣ ರೆಪ್ಪೆಯಲ್ಲಿಯೇ ಕುಣಿದು ಮಾಯವಾಗುವ ಮರೀಚಿಕೆಯ
ಬೆನ್ನುಹತ್ತಿದ್ದ ನನಗೆ ..
ವಾಸ್ತವದ ಅರಿವಾದಾಗ
ಎಂಟು ತಿಂಗಳುಗಳೇ ಗತಿಸಿದ್ದವು ,,
ಏಕೆಂದರೆ
ಪರೀಕ್ಷೆಗೆ ಕೇವಲ ಎರಡು ತಿಂಗಳುಗಳು ಉಳಿದಿದ್ದವು ..!!!
ನನ್ನೆಲ್ಲಯ ಹಳೆಯ ನೆನಪುಗಳನ್ನು
ಗುಡಿಸಿ ,,ಒಟ್ಟುಮಾಡಿ ,,ಪೆಟ್ಟಿಗೆಯಲ್ಲಿಟ್ಟು ,,
ಕಾಲವೆಂಬ ಕಡಲಲ್ಲಿ ಎಸೆದು ಬಿಡಬೇಕೆಂದಿದ್ದೆ .....
ಆ ನೆನಪಿನ ಪೆಟ್ಟಿಗೆ ಕೈ ಜಾರಿತು ,,
ಚೆಲ್ಲಿದ ಆ ನೆನಪುಗಳನ್ನು
 ಹೆಕ್ಕಿ ಪೆಟ್ಟಿಗೆಯಲ್ಲಿ ಹಾಕಿದೆ
ಖುಷಿಯ ಅರ್ಥ ಕೈಗಳಿಗೆ ಅಂಟಿಕೊಂಡಿತ್ತು ...
ಮನವೆಂಬ ತೀರ ಒದ್ದೆಯಾಗಿತ್ತು ....

ಶುಕ್ರವಾರ, ಜನವರಿ 7, 2011

ನಿನ್ನ ನೆನಪು

ನೆನಪೇ ನಿನಗೊಂದು ನಮಸ್ಕಾರ
ಬಾರದಿರು ಮತ್ತೆ ಮತ್ತೆ ..
ಈ ಜೀವವಿಲ್ಲದ ಹೃದಯಕ್ಕೆ

ಪುಟಗಟ್ಟಲೆ ಬರೆದ ಕವನಗಳನ್ನು
ಮನಸ್ಸಿನಲ್ಲಿಯೇ ಗೀಚಿದ ಪತ್ರಗಳನ್ನು
ನಿನಗಾಗಿಯೇ ಹಾಡಿದ ಹಾಡುಗಳನ್ನು
ಕಣ್ತುಂಬ ಕಟ್ಟಿದ ಸ್ನೇಹದ ಕನಸುಗಳನ್ನು
ಎಲ್ಲ
ಎಲ್ಲಾ ಮರೆತುಬಿಡಬೇಕು ಅಂದಿದ್ದೆ ..

ಆದರೆ...
ಉಳಿದು ಬಿಟ್ಟೆ ಎದೆಯಾಳದಲ್ಲಿ
ಬೆಟ್ಟದಂತೆ ..ಕಡಲಂತೆ...ಗಾಳಿಯಂತೆ...
ಬೆಂಕಿಯಂತೆ...ಬೂದಿಯಂತೆ...
ನಿಂತು ಬಿಟ್ಟೆ ನಾ ಒಂಟಿಯಾಗಿ
ಗಾಳಿಗೆ ಹಾರಿದ ದೀಪದಂತೆ ..

ನೆನಪೇ ,,,ನಿನಗೊಂದು ನಮಸ್ಕಾರ ,
ಬಾರದಿರು ಮರಳಿ ಮತ್ತೆ ಮತ್ತೆ ..
ಈ ಹೆಣವಾದ ಬಾಳಿಗೆ ಋಣವಾಗಿ.....

ಹಾಗೆ ಸುಮ್ಮನೆ,,

ಆ ದೇವರು ನನ್ನನ್ನು ಸೃಷ್ಟಿಸಿ
ಈ ನೆಲದಲ್ಲಿ ಬಿಡುವಾಗ
ಅದ್ಯಾವ ಧ್ಯಾನದಲ್ಲಿದ್ದನೋ,,,
ನನ್ನಲ್ಲಿ ಹಕ್ಕಿಯ ಮನಸ್ಸನ್ನು
ಇಟ್ಟುಬಿಟ್ಟ,,
ಆದರೆ ...
ನೆಲದಲ್ಲಿ ಆಕಾಶವೇ ಇರಲಿಲ್ಲ!!!
ಟೈಟಾನಿಕ್ ಮುಳುಗಿದರೂ
ಕಾಗದದ ದೋಣಿ ಮುಳುಗದು ...
ನೆಂದು ಚಪ್ಪಟೆಯಾದರೂ.
ತಲೆ ಕೆಳಗಾದರೂ
ತೇಲುವುದು .;
ಕನಸಿನಂತೆ ,,ಧ್ಯೇಯದಂತೆ ..


ಬದುಕಿನಂತೆ..,,
ನಿನ್ನಂತೆ..