ಶುಕ್ರವಾರ, ಜನವರಿ 7, 2011

ನಿನ್ನ ನೆನಪು

ನೆನಪೇ ನಿನಗೊಂದು ನಮಸ್ಕಾರ
ಬಾರದಿರು ಮತ್ತೆ ಮತ್ತೆ ..
ಈ ಜೀವವಿಲ್ಲದ ಹೃದಯಕ್ಕೆ

ಪುಟಗಟ್ಟಲೆ ಬರೆದ ಕವನಗಳನ್ನು
ಮನಸ್ಸಿನಲ್ಲಿಯೇ ಗೀಚಿದ ಪತ್ರಗಳನ್ನು
ನಿನಗಾಗಿಯೇ ಹಾಡಿದ ಹಾಡುಗಳನ್ನು
ಕಣ್ತುಂಬ ಕಟ್ಟಿದ ಸ್ನೇಹದ ಕನಸುಗಳನ್ನು
ಎಲ್ಲ
ಎಲ್ಲಾ ಮರೆತುಬಿಡಬೇಕು ಅಂದಿದ್ದೆ ..

ಆದರೆ...
ಉಳಿದು ಬಿಟ್ಟೆ ಎದೆಯಾಳದಲ್ಲಿ
ಬೆಟ್ಟದಂತೆ ..ಕಡಲಂತೆ...ಗಾಳಿಯಂತೆ...
ಬೆಂಕಿಯಂತೆ...ಬೂದಿಯಂತೆ...
ನಿಂತು ಬಿಟ್ಟೆ ನಾ ಒಂಟಿಯಾಗಿ
ಗಾಳಿಗೆ ಹಾರಿದ ದೀಪದಂತೆ ..

ನೆನಪೇ ,,,ನಿನಗೊಂದು ನಮಸ್ಕಾರ ,
ಬಾರದಿರು ಮರಳಿ ಮತ್ತೆ ಮತ್ತೆ ..
ಈ ಹೆಣವಾದ ಬಾಳಿಗೆ ಋಣವಾಗಿ.....

6 ಕಾಮೆಂಟ್‌ಗಳು:

  1. ಅನೂಷಾ..

    ಬಹಳ ಸುಂದರ ಸಾಲುಗಳು... !!

    ಭಾವಗಳನ್ನು ಶಬ್ಧಗಳಲ್ಲಿ ಬಿಡಿಸಿಡುವದು ಬಹಳ ಕಷ್ಟ...

    ತುಂಬಾ ಚೆನ್ನಾಗಿ ಬಿಡಿಸಿಟ್ಟಿದ್ದೀರಿ...

    ಅಭಿನಂದನೆಗಳು...

    ಜೈ ಹೋ.. !!

    ಪ್ರತ್ಯುತ್ತರಅಳಿಸಿ
  2. 'ನೆನಪೇ ನಿನಗೊಂದು ನಮಸ್ಕಾರ'ಸುಂದರ ಸಾಲುಗಳು.

    ಪ್ರತ್ಯುತ್ತರಅಳಿಸಿ
  3. ನನ್ನ ಈ ಮೊದಲ ಪ್ರಯತ್ನವನ್ನು ಶ್ಲಾಘಿಸಿದ ಎಲ್ಲರಿಗೂ ದನ್ಯವಾದಗಳು..

    ಪ್ರತ್ಯುತ್ತರಅಳಿಸಿ